ನಳಕೂಬರ 1 -
ಕುಬೇರನ ಕಿರಿಯ ಮಗ. ಮಣಿಗ್ರೀವನ ತಮ್ಮ. ವಿಲಾಸಪ್ರಿಯನಾದ ಈತನಿಗೆ ರಂಭೇ ಪ್ರೇಯಸಿ. ಒಮ್ಮೆ ಕೈಲಾಸಪರ್ವತದಲ್ಲಿ ಅಣ್ಣತಮ್ಮಂದಿರಿಬ್ಬರೂ ಯಕ್ಷಿಣಿಯರೊಂದಿಗೆ ಪಾನಮತ್ತರಾಗಿ ವಿಲಾಸದಲ್ಲಿ ತೊಡಗಿದ್ದಾಗ ಅಲ್ಲಿಗೆ ಬಂದ ದೇವರ್ಷಿ ನಾರದರನ್ನು ಇವರು ಗಮನಿಸಲಿಲ್ಲವಾಗಿ ಭೂಲೋಕದಲ್ಲಿ ಮತ್ತಿ ಮರಗಳಾಗಿ ಹುಟ್ಟುವಂತೆ ಅವರು ಶಾಪ ಕೊಟ್ಟರು. ಅದರಂತೆ ನೂರು ವರ್ಷಗಳ ಕಾಲ ಭೂಲೋಕದಲ್ಲಿ ಮತ್ತಿ ಮರಗಳಾಗಿದ್ದು ಅನಂತರ ಕೃಷ್ಣನಿಂದ ಶಾಪವಿಮೋಚನೆ ಪಡೆದು ಮತ್ತೆ ತಮ್ಮ ಲೋಕವಾದ ಅಲಕಾವತಿಯನ್ನು ಸೇರಿದರು.				
	(ಎಸ್.ಎನ್.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ